






ಕಡಬ ಟೈಮ್ಸ್ (KADABA TIMES ): ಪಂಜ ಅರಣ್ಯ ವಲಯ ವ್ಯಾಪ್ತಿಯ ಆಲಂಕಾರಿನಲ್ಲಿ ಅಕ್ರಮವಾಗಿ ಮರ ಕಡಿದು ಸಾಗಾಟಕ್ಕೆ ಯತ್ನಿಸುತ್ತಿದ್ದ ವೇಳೆ ಮೂವರನ್ನು ವಶಕ್ಕೆ ಪಡೆದು ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಜೂ.1ರಂದು ನಡೆದಿದೆ.
![]() |
ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದಿರುವುದು (KADABA TIMES) |
ಕಡಬ ತಾಲೂಕಿನ ಅಲಂಕಾರು ಗ್ರಾಮದ ಕಕ್ವೆ ಸಮೀಪದ ಪಜ್ಜಾಪು ಎಂಬಲ್ಲಿ ಈ ಘಟನೆ ನಡೆದಿರುವುದಾಗಿದೆ. ಸುಮಾರು ಐದು ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ .ಬಂಧಿತ ಆರೋಪಿಗಳನ್ನು ಸವಣೂರನ ನಾಸೀರ್, ನವಾಜ್ , ಸಿದ್ದಿಕ್ ತಿಂಗಳಾಡಿ ಎಂದು ಅರಣ್ಯಾಧಿಕಾರಿ ಸಂಧ್ಯಾ ಅವರು ತಿಳಿಸಿದ್ದಾರೆ
ಅಕ್ರಮವಾಗಿ ಬೃಹತ್ ಹೆಬ್ಬಲಸು ಮರ ಕಡಿದ ಸಂದರ್ಭ ವಿದ್ಯುತ್ ತಂತಿಗೆ ಬಿದ್ದಿದ್ದು
ಹೀಗಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ಮರ
ಬಿದ್ದ ಕಾರಣ ಆರಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ವಿದ್ಯುತ್ ಕಡಿತಗೊಂಡಿತ್ತು.
ಮೆಸ್ಕಾಂ
ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ದುರಸ್ತಿಕಾರ್ಯಕ್ಕೆ ಮುಂದಾಗಿದ್ದಾರೆ. ಮೆಸ್ಕಾಂ ಇಲಾಖೆಗೆ
ಆಗಿರುವ ನಷ್ಟವನ್ನು ಆರೋಪಿಗಳಿಂದಲೇ ಭರಿಸುವ ಬೆಗ್ಗೆ
ಮೆಸ್ಕಾಂ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿದು
ಬಂದಿದೆ.