




ಕಡಬ ಟೈಮ್ಸ್ (KADABA TIMES): ರಸ್ತೆ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದೀಗ ಕಾನೂನು ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಆರು ಮಂದಿಗೆ ಠಾಣೆಯಿಂದ ನೋಟಿಸು ನೀಡಿರುವುದು ತಿಳಿದು ಬಂದಿದೆ.
ಮೇ.2ರಂದು ನಡೆದ ರೌಡಿ ಶೀಟರ್ ಸುಹಾಸ್
ಶೆಟ್ಟಿ ಕೊಲೆ ಪ್ರಕರಣ ನಡೆದಿತ್ತು. ಈ ಘಟನೆ ಖಂಡಿಸಿ
ವಿ.ಹಿಂ.ಪ. ಜಿಲ್ಲಾ ಬಂದ್
ಗೆ ಕರೆ ನೀಡಿದ್ದು,ಈ ಹಿನ್ನಲೆಯಲ್ಲಿ ಕಡಬದಲ್ಲಿ
ಪ್ರತಿಭಟನಾಕಾರರು ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ತಡೆ ನಡೆಸಿದರು. ರಸ್ತೆಯಲ್ಲಿ ಟಯರ್
ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ತಡೆ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಪೈಕಿ ಸಂಘಟನೆಯ ಪ್ರಮೋದ್ ನಂದುಗುರಿ, ದೇವಿ ಪ್ರಸಾದ್ ಮರ್ದಾಳ, ತಿಲಕ್ ರೈ ನಂದುಗುರಿ, ಮೋಹನ್ ಕೆರೆಕ್ಕೊಡಿ, ರಾಧಾಕೃಷ್ಣ ಕೋಲ್ಪೆ, ಪ್ರೇಮಚಂದ್ರ ಅಜ್ಜರಮೂಲೆ ಇವರ ವಿರುದ್ದ ಕಡಬ ಠಾಣಾ ಅ.ಕ್ರ.32/2025 ಕಲಂ 126(2) 189(2),285,190 ಬಿನ್‌ಎಸ್ 2023ರಂತೆ ಪ್ರಕರಣ ದಾಖಲಾಗಿತ್ತು.
ಇದೀಗ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಗೆ ಕಡಬ ಠಾಣೆಯಿಂದ ನೋಟಿಸು ನೀಡಲಾಗಿದೆ. ಆರೋಪಿತರಿಗೆ ಕಡಬ ಠಾಣೆಯಿಂದ ಜೂ.23ರಂದು ನೋಟಿಸು ಲಭಿಸಿದೆ, ಈಗಾಗಲೇ ಆರು ಮಂದಿ ಠಾಣೆಗೆ ತೆರಳಿ ಸಹಿ ಮಾಡಿದ್ದಾರೆ. ಮೇ.7ರಂದು ಕಡಬ ಠಾಣೆಗೆ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ ಅಲ್ಲಿ ತಿಳಿಸಲಾಗಿದೆ.