ಸುಬ್ರಹ್ಮಣ್ಯ: 15 ವರ್ಷದ ಬಾಲಕಿ ಐದು ತಿಂಗಳ ಬಸುರಿ: ಅಪ್ರಾಪ್ತ ಬಾಲಕನ ಬಂಧನ

ಸುಬ್ರಹ್ಮಣ್ಯ: 15 ವರ್ಷದ ಬಾಲಕಿ ಐದು ತಿಂಗಳ ಬಸುರಿ: ಅಪ್ರಾಪ್ತ ಬಾಲಕನ ಬಂಧನ

Kadaba Times News
0

 ಕಡಬ ಟೈಮ್ಸ್ ,ಪ್ರಮುಖ ಸುದ್ದಿ:  ಅಪ್ರಾಪ್ತ ವಯಸ್ಸಿನ ಬಾಲಕನಿಂದ ಬಾಲಕಿಯೋ ರ್ವಳು ಗರ್ಭವತಿಯಾದ ಬಗ್ಗೆ  ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.


15 ವರ್ಷದ ಬಾಲಕಿ ಐದು ತಿಂಗಳ ಬಸುರಿಯಾಗಿದ್ದು, ಆಕೆ ಆಸ್ಪತ್ರೆಗೆ ಬಂದಾಗ ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ಬಾಲಕಿ ಸಂಬಂಧಿಯಿಂದಲೇ ಈ ಕೃತ್ಯ ನಡೆದಿದೆ ಎನ್ನಲಾಗಿದೆ.


ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಮೇಲೆ ಲೈಂಗಿನ ದೌರ್ಜನ್ಯ ಹೆಚ್ಚಾಗುತ್ತಿದ್ದು, ಅದನ್ನು ತಡೆಗಟ್ಟಲು ಪೋಕ್ಸೊ ಕಾಯ್ದೆ ಜಾರಿಗೆ ತರಲಾಗಿದೆ. ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುವುದು, ಮುಟ್ಟುವುದು, ಸನ್ನೆ ಮಾಡುವುದು, ರೇಗಿಸುವುದು, ವಿವಿಧ ಆಮಿಷ ತೋರಿಸಿ ಏಕಾಂತ ಸ್ಥಳಕ್ಕೆ ಕರೆಯುವುದು ಸೇರಿದಂತೆ ದೈಹಿಕವಾಗಿ ಬಳಸಿಕೊಳ್ಳುವುದು ಘೋರ ಅಪರಾಧ.  ಇದು ಜಾಮೀನು ರಹಿತ ಶಿಕ್ಷೆಗೆ ಒಳಪಡುತ್ತದೆ


ಪೋಕ್ಸೋ ಕಾಯ್ದೆ: ಲೈಂಗಿಕ ಹಾಗೂ ಎಲ್ಲಾ ರೀತಿಯ ಅಪರಾಧ, ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ 2012ರಲ್ಲಿ ಜಾರಿಗೆ ಬಂದಿದ್ದೆ ಪೋಕ್ಸೋ ಕಾಯ್ದೆ. POCSO ಅಂದರೆ The Protection of Children from Sexual Offences ಅಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ.


ಪೋಕ್ಸೋ ಕಾಯ್ದೆ 2012ನ್ನು ಲೈಂಗಿಕ ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ವರ್ತನೆಗಳಂತಹ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವುದಕ್ಕಾಗಿ, ಮಕ್ಕಳ ಹಿತಾಸಕ್ತಿ ಮತ್ತು ಒಳಿತಿನ ರಕ್ಷಣೆಗಾಗಿ ಜಾರಿಗೆ ತರಲಾಗಿತ್ತು. ಈ ಕಾಯ್ದೆಯು 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಯಾವುದೇ ವ್ಯಕ್ತಿಯನ್ನು ‘ಮಗು ಎಂದು ವ್ಯಾಖ್ಯಾನಿಸುತ್ತದೆ. ಆ ಮಗುವಿನ ದೈಹಿಕ ಆರೋಗ್ಯ, ಭಾವನಾತ್ಮಕ, ಭೌದ್ಧಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಪ್ರತೀ ಹಂತದಲ್ಲಿಯೂ ಆದ್ಯತೆ ನೀಡಿ ಖಾತ್ರಿಪಡಿಸುತ್ತದೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top