ಕೊನೆಗೂ ರಚನೆಯಾಯ್ತು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ

ಕೊನೆಗೂ ರಚನೆಯಾಯ್ತು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ

Kadaba Times News
0

 ಕಡಬ ಟೈಮ್ಸ್(KADABA TIMES): ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿ ರಚನೆಗೆ  ಒಂದು ವರ್ಷದಿಂದ ನಡೆಯುತ್ತಿದ್ದ ಹಗ್ಗ ಜಗ್ಗಾಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಡಾ| ಬಿ.ರಘು ಬೆಳ್ಳಿಪ್ಪಾಡಿ, ಮಹೇಶ್ ಕುಮಾರ್ ಕರಿಕ್ಕಳ, ಅಶೋಕ್ ನೆಕ್ರಾಜೆ ಯೇನೆಕಲ್, ಹರೀಶ್ ಇಂಜಾಡಿ ಸುಬ್ರಹ್ಮಣ್ಯ, ಲೀಲಾ ಮನಮೋಹನ ಅಜ್ಜಾವರ, ಪ್ರವೀಣ ಮರುವಂಜ ಮುಪ್ಪೇರ್ಯ, ಸೌಮ್ಯ ಭರತ್ ಸುಬ್ರಹ್ಮಣ್ಯ ಹಾಗೂ ಅಜಿತ್ ಪೂಜಾರಿಯವರು ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.



 ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ಇಂಜಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆರಂಭದಲ್ಲಿ ಮಹೇಶ್ ಕುಮಾರ್ ಕರಿಕ್ಕಳ ಅವರ ಅಧ್ಯಕ್ಷತೆಯನ್ನು ಹೈಕಮಾಂಡ್ ಸೂಚಿಸಿತ್ತು. ಆದರೆ ಇದಕ್ಕೆ ಹರೀಶ್ ಇಂಜಾಡಿ, ಅಶೋಕ್ ನೆಕ್ರಾಜೆ ಬಂಡೆದ್ದು ಸ್ಪರ್ಧೆ ನಡೆಸುವ ಸಾಧ್ಯತೆ ಎದುರಾಯಿತು. ಹಿನ್ನೆಲೆಯಲ್ಲಿ ನೇಮಕಗೊಂಡ ಸದಸ್ಯರು ಮಾತ್ರ ಇದ್ದು ಸಮಾಲೋಚನೆ ನಡೆಯಿತು. ಇದು ಒಂದು ಗಂಟೆಯಾದರೂ ಮುಗಿಯದಿದ್ದಾಗ ಹೊರಗೆ ಕಾಯುತ್ತಿದ್ದ ಕೆಲವರು ಒಳಕ್ಕೆ ಹೋಗಿ ಮಾತನಾಡಿದರು.


ವೇಳೆ ..ರವರು ಒಳ ಬಂದು ಅವರನ್ನು ಹೊರ ಹೋಗುವಂತೆ ವಿನಂತಿಸಿದರು. ಬಳಿಕ ಮತ್ತೆ ಸಮಾಲೋಚನೆ ಮುಂದುವರಿಯಿತು. ಮಧ್ಯೆ ಪಕ್ಷದ ಜಿಲ್ಲಾ ಹೈಕಮಾಂಡ್ ಬಂಡೆದ್ದ ಸದಸ್ಯರನ್ನು ಸಂಪರ್ಕಿಸಿ ಮನವೊಲಿಸುವ ಕಾರ್ಯ ಮಾಡಿದರೂ ಸಲಕಾರಿಯಾಗಲಿಲ್ಲ. ಸಭೆಗೆ ..ಬಂದ ಬಳಿಕ ಮತ್ತೆ ಸಮಾಲೋಚನೆ ಮುಂದುವರಿಯಿತು. ಆದರೆ ಹರೀಶ್ ಇಂಜಾಡಿ ಸ್ಪರ್ಧೆಯಿಂದ ಹಿಂದೆ ಸರಿಯದ ಕಾರಣ  ಮಹೇಶ್ ಕುಮಾರ್ ಕರಿಕ್ಕಳ ಸಭೆಯಿಂದ ಹೊರನಡೆದಿರುವುದಾಗಿ ತಿಳಿದು ಬಂದಿದೆ.ಬಳಿಕ ಚುನಾವಣಾ ಪ್ರಕ್ರಿಯೆ ನಡೆಯಿತು. ಹರೀಶ್ ಇಂಜಾಡಿಯವರ ಹೆಸರನ್ನು ಸೌಮ್ಯ ಸೂಚಿಸಿ ಡಾ. ರಘು ಅನುಮೋದಿಸಿದರೆಂದು ತಿಳಿದುಬಂದಿದೆ.


ಸಭೆಯಿಂದ ಹೊರ ನಡೆದ ಮಹೇಶ್ ಕುಮಾರ್ : ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಆಯ್ಕೆಗೆ ಒಂದು ಗಂಟೆಯಿಂದ ಮುಚ್ಚಿದ ಬಾಗಿಲ ನಡುವೆ ಸಮಾಲೋಚನೆ ನಡೆದರೂ ಒಮ್ಮತ ಮೂಡದೆ ಮಹೇಶ್ ಕುಮಾರ್ ಕರಿಕ್ಕಳ ಹೊರ ಸಭೆಯಿಂದ ಹೊರ ನಡೆದಿದ್ದಾರೆ. ಮಧ್ಯೆ ಪಕ್ಷದ ಜಿಲ್ಲಾ ಹೈಕಮಾಂಡ್ ಬಂಡೆದ್ದ ಸದಸ್ಯರನ್ನು ಸಂಪರ್ಕಿಸಿ ಮನವೊಲಿಸುವ ಕಾರ್ಯ ಮಾಡಿದರೂ ಫಲಕಾರಿಯಾಗಲಿಲ್ಲ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top