


ಕಡಬ: ತೆಂಗಿನಕಾಯಿ
ಕೀಳಲು ಮರಕ್ಕೆ
ಹತ್ತಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಕಡಬ
ತಾಲೂಕು ಬಲ್ಯ ಗ್ರಾಮದ ಪಲ್ಲತಡ್ಕ ನಿವಾಸಿ ದಿ|ಐತ್ತಪ್ಪ ಪೂಜಾರಿ
ಅವರ ಪುತ್ರ ಉಮೇಶ್ (46.ವ) ಮೃತ
ಪಟ್ಟವರು.
ತನ್ನ
ಮನೆಯ ತೋಟದಲ್ಲಿ ತೆಂಗಿನಕಾಯಿ ತೆಗೆಯಲು ತೆಂಗಿನ
ಮರಕ್ಕೆ ಹತ್ತಿದ್ದರು. ಆಯತಪ್ಪಿ ಕೆಳಕ್ಕೆ
ಬಿದ್ದು ಗಂಭೀರಗಾಯಗೊಂಡಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಕೂಲಿ
ಕಾರ್ಮಿಕನಾಗಿದ್ದುಕೊಂಡು
ಸಾಮಾಜಿಕ ಕೆಲಸಗಳಲ್ಲಿ ಸಕ್ರೀಯರಾಗಿದ್ದ ಉಮೇಶ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೇರಾಜೆ ಒಕ್ಕೂಟದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು
ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.