ಕಾಣಿಯೂರು:ರಸ್ತೆಯುದ್ದಕೂ ಆವರಿಸಿದ್ದ ಧೂಳಿಗೆ ಮುಕ್ತಿ ನೀಡಿದ ಬೆಳಂದೂರು ಗ್ರಾ.ಪಂ ಉಪಾಧ್ಯಕ್ಷ

ಕಾಣಿಯೂರು:ರಸ್ತೆಯುದ್ದಕೂ ಆವರಿಸಿದ್ದ ಧೂಳಿಗೆ ಮುಕ್ತಿ ನೀಡಿದ ಬೆಳಂದೂರು ಗ್ರಾ.ಪಂ ಉಪಾಧ್ಯಕ್ಷ

Kadaba Times News
0

 ಕಡಬ ಟೈಮ್, ಕಾಣಿಯೂರು: ಕಾಣಿಯೂರು-ಮಾದೋಡಿ- ಪೆರುವಾಜೆ ಸಂಪರ್ಕ ರಸ್ತೆಯಲ್ಲಿ  ಕುಡಿಯುವ ನೀರಿನ ಯೋಜನೆಗೆ ಪೈಪ್ ಅಳವಡಿಸಲು ಮಾರ್ಗದ ಬದಿಯಲ್ಲಿ ಕಂದಕ ಅಗೆದ ಕಾರಣ ಕಾಂಕ್ರೀಟ್ ರಸ್ತೆಯಿಡಿ  ಮಣ್ಣು ಬಿದ್ದು ಧೂಳು ತುಂಬಿತ್ತು.


ಇದರಿಂದ  ವಾಹನ ಸವಾರರು ಮತ್ತು ಪಾದಚಾರಿಗಳು, ಶಾಲಾ ಮಕ್ಕಳು  ಕಿರಿ ಕಿರಿ ಅನುಭವಿಸುತ್ತಿದ್ದರು. ಅಲ್ಲದೆ  ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿತ್ತು.

ರಸ್ತೆಗೆ ಟ್ಯಾಂಕರ್ ಮೂಲಕ ನಿರು ಹಾಯಿಸುತ್ತಿರುವುದು(KADABA TIMES)


ಈ ಸಮಸ್ಯೆಯನ್ನು  ಮನಗಂಡ ಬೆಳಂದೂರು ಗ್ರಾ.ಪಂ  ಉಪಾಧ್ಯಕ್ಷ  ಜಯಂತ ಅಬೀರ ಅವರು ಸ್ಥಳೀಯರಾದ  ದಿನೇಶ್  ಎಂಬವರ ಸಹಕಾರದೊಂದಿಗೆ ಟ್ಯಾಂಕರ್ ಮೂಲಕ ನೀರು ಹಾಕಿ ರಸ್ತೆಯಲ್ಲಿ ಇರುವ ಧೂಳು ಮಣ್ಣಗೆ ಮುಕ್ತಿ ನೀಡಲು ಮುಂದಾಗಿದ್ದಾರೆ. 

ಗ್ರಾ.ಪಂ ಉಪಾಧ್ಯಕ್ಷರ ಈ ಕಾರ್ಯಕ್ಕೆ ಊರಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top