ಕಡಬದ ಪೇರಡ್ಕ ಬಳಿ ನಡೆದ ದುರ್ಘಟನೆ: ರಸ್ತೆ ಬದಿಯ ಮೋರಿಗೆ ಗುದ್ದಿದ ಬೈಕ್- ಅಪ್ರಾಪ್ತ ಬೈಕ್ ಸವಾರ ಮೃತ್ಯು

ಕಡಬದ ಪೇರಡ್ಕ ಬಳಿ ನಡೆದ ದುರ್ಘಟನೆ: ರಸ್ತೆ ಬದಿಯ ಮೋರಿಗೆ ಗುದ್ದಿದ ಬೈಕ್- ಅಪ್ರಾಪ್ತ ಬೈಕ್ ಸವಾರ ಮೃತ್ಯು

Kadaba Times News

 ಕಡಬ ಟೈಮ್ಸ್, ಪ್ರಮುಖ ಸುದ್ದಿ :  ಬೈಕ್ ನಲ್ಲಿ ಬರುತ್ತಿದ್ದ ಅಪ್ರಾಪ್ತ ಬಾಲಕನೋರ್ವ  ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಬಿದ್ದ ಪರಿಣಾಮ  ಗಂಭೀರ ಗಾಯಗೊಂಡು ಬಳಿಕ  ಮೃತಪಟ್ಟ ಘಟನೆ ಜ.17 ರ ಮುಂಜಾನೆ ಕಡಬದಿಂದ ವರದಿಯಾಗಿದೆ. 

ಅಪಘಾತ ನಡೆದ ಸ್ಥಳದಲ್ಲಿ ಬೈಕ್ ಬಿದ್ದಿರುವ ದೃಶ್ಯ(KADABA TIMES)


ನೂಜಿಬಾಳ್ತಿಲ ಗ್ರಾಮದ ಹೊಸಮನೆ ಕಾನ ನಿವಾಸಿ ವಿಶ್ವನಾಥ್ ಎಂಬವರ ಪುತ್ರ ಆಶಿಶ್(16) ಮೃತ ಬಾಲಕ.


ಪೇರಡ್ಕದ ಖಾಸಗಿ ಶಾಲೆಯಲ್ಲಿ  ಹತ್ತನೇ ತರಗತಿ ಓದುತ್ತಿದ್ದ ಬಾಲಕ  ಶುಕ್ರವಾರ ಮುಂಜಾನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೇರಡ್ಕ ಸಮೀಪದ ಗರ್ಗಸ್ ಪಾಲ್ ಎಂಬಲ್ಲಿ ಬರುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮೋರಿಗೆ  ಢಿಕ್ಕಿ ಹೊಡೆದು ಪಲ್ಟಿಯಾಗಿದೆ.


ಕೂಡಲೇ ಸ್ಥಳೀಯರು  ಬಾಲಕನನ್ನು ಕಡಬದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಗಂಭೀರ ಗಾಯಗೊಂಡಿದ್ದ ಬಾಲಕ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top