ಸುಬ್ರಹ್ಮಣ್ಯ: ಬೆಳ್ಳಂಬೆಳಗ್ಗೆ ಕುಕ್ಕೆ ದೇಗುಲದ ಬಳಿಯ ಅರ್ಚಕನ ಮನೆಯಿಂದ ಚಿನ್ನದ ತುಳಸಿಯ ಮಣಿಸರ ಸಹಿತ ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವು

ಸುಬ್ರಹ್ಮಣ್ಯ: ಬೆಳ್ಳಂಬೆಳಗ್ಗೆ ಕುಕ್ಕೆ ದೇಗುಲದ ಬಳಿಯ ಅರ್ಚಕನ ಮನೆಯಿಂದ ಚಿನ್ನದ ತುಳಸಿಯ ಮಣಿಸರ ಸಹಿತ ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವು

Kadaba Times News
0

ಕಡಬ ಟೈಮ್ಸ್, ಸುಬ್ರಹ್ಮಣ್ಯ: ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ವಸತಿ ಗೃಹದಲ್ಲಿ ವಾಸವಿದ್ದ ಅರ್ಚಕರೋರ್ವರ ಮನೆಯಿಂದ ನವರತ್ನಗಳಿರುವ   ಚಿನ್ನದ ತುಳಸಿಯ ಮಣಿಸರ ಸಹಿತ ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ಸುಬ್ರಹ್ಮಣ್ಯದಿಂದ ವರದಿಯಾಗಿದೆ.

ಕಳ್ಳತನ ನಡೆದಿರುವ ಮನೆಗೆ ಬಂದಿರುವ ಅಧಿಕಾರಿಗಳ ತಂಡ


ಸುಬ್ರಹ್ಮಣ್ಯ ಮಠದಲ್ಲಿ ಅರ್ಚಕರಾಗಿರುವ ಆನಂದ ಭಟ್ ಎಂಬವರ ಮನೆಯಿಂದ ಡಿ.22 ರಂದು ಬೆಳಗ್ಗಿನ ಜಾವ ಕಳ್ಳತನ ನಡೆದಿದೆ.ಡಿ.22 ರ ಮುಂಜಾನೆ 4:30 ರ ಸಮಯಕ್ಕೆ  ಪೂಜೆ ಸಲುವಾಗಿ ಮಠಕ್ಕೆ ತೆರಳಿದ್ದು ಮಧ್ಯಾಹ್ನ ವೇಳೆ ಮರಳಿ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.



ಮನೆಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದಲ್ಲದೆ, ಕಪಾಡಿನಲ್ಲಿದ್ದ  ಚಿನ್ನಾಭರಣಗಳು ಕಳ್ಳನವಾಗಿದ್ದು ಒಟ್ಟು ಮೌಲ್ಯ 1,15,000 ಎಂದು ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಪಿ ಎಸ್.ಐ ಕಾರ್ತಿಕ್,  ಅಪರಾಧ ಸ್ಥಳ ಪರಿಶೀಲನಾಧಿಕಾರಿ ಅರ್ಪಿತಾ,ಸುಮನ್ ಬಿ.ಎಂ, ಶ್ವಾನದಳ ವಿಭಾಗದ ಜಯಪ್ರಕಾಶ್, ಬೆರಳಚ್ಚು ತಜ್ಞರಾದ ಸಚಿನ್, ಉದಯ ಆಗಮಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top