Naxal leader : ನಕ್ಸಲ್ ನಾಯಕ ಹೆಬ್ರಿಯ‌ ಕಾಡಿನಲ್ಲಿ ಎನ್ ಕೌಂಟರ್ ಗೆ ಬಲಿ

Naxal leader : ನಕ್ಸಲ್ ನಾಯಕ ಹೆಬ್ರಿಯ‌ ಕಾಡಿನಲ್ಲಿ ಎನ್ ಕೌಂಟರ್ ಗೆ ಬಲಿ

Kadaba Times News
0

 


ಕಡಬ ಟೈಮ್, ಕಾರ್ಕಳ: ಕಳೆದಕೆಲ ದಿನಗಳಿಂದ ಕಾರ್ಕಳ, ಹೆಬ್ರಿ ಭಾಗದಲ್ಲಿ ನಕ್ಸಲ್ ಚಟುವಟಿಕೆ  ಹಿನ್ನೆಲೆಯಲ್ಲಿ ಕೂಂಬಿಂಗ್ ತೀವ್ರಗೊಳಿಸಿದ್ದ ಎಎನ್ಎಫ್ ನಿಂದ ನಕ್ಸಲ್ ನಾಯಕ ವಿಕ್ರಂ ಗೌಡ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ.


ಹೆಬ್ರಿ ಪರಿಸರ ಕಬ್ಬಿನಾಲೆ, ಪೀತೆಬೈಲು ಪರಿಸರದಲ್ಲಿ ನಾಲ್ವರು ನಕ್ಸಲರು   ಓಡಾಡುತ್ತಿದ್ದ ಮಾಹಿತಿ ಹಿನ್ನೆಲೆಯಲ್ಲಿ ಎಎನ್ ಎಫ್ ಕಾರ್ಯಾಚರಣೆ ನಡೆಸಿದ್ದು, ನಡುವೆ ಎಎನ್ ಎಫ್, ನಕ್ಸಲರನಡುವೆ ಮುಖಾಮುಖಿಯಾಗಿದ್ದು, ಗುಂಡಿನ ಚಕಮಕಿ ನಡೆದಿದೆ. ನಕ್ಸಲ್ ನಾಯಕ ವಿಕ್ರಮ್ ಗೌಡನಿಗೆ ಗುಂಡು ತಗುಲಿದ್ದು, ಮೃತಪಟ್ಟಿದ್ದು, ಮೂವರು ಕಾಡಿನಲ್ಲಿ ತಲೆಮರೆಸಿಕೊಂಡಿದ್ದಾರೆ. ಕಾರ್ಕಳ, ಹೆಬ್ರಿ ಸಹಿತ ವಿವಿಧ  ಪಶ್ಚಿಮಘಟ್ಟ ಕಾಡಿನಲ್ಲಿ  ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಂಡಿದೆ. ಘಟನೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.


ವಾರದ ಹಿಂದೆ ಚಿಕ್ಕಮಗಳೂರು ಜಿಲ್ಲೆಯ  ಕೊಪ್ಪದ ಕಾಡಿನಂಚಿನ ಮನೆಯಲ್ಲಿ ನಕ್ಸಲರು ಬಿಟ್ಟು ಹೋಗಿದ್ದ ಮೂರು ಬಂದೂಕುಗಳು ಪತ್ತೆಯಾಗಿದ್ದವು. ಬಳಿಕ ದಿನಗಳಲ್ಲಿ ಕಾರ್ಕಳದ ಕಾಡುಗಳಲ್ಲಿ  ನಕ್ಸಲರ ಓಡಾಟ  ನಡೆಸುತ್ತಿರುವುದು ಪತ್ತೆಯಾಗಿತ್ತು. ಹಿನ್ನೆಲೆಯಲ್ಲಿ ಕರ್ನಾಟಕದ ಎಎನ್ಎಫ್ ಕಾರ್ಯಾಚರಣೆಗೆ ಮುಂದಾಗಿತ್ತು. ನಿನ್ನೆ (ಸೋಮವಾರ) ಮಧ್ಯರಾತ್ರಿ 5 ಮಂದಿ ನಕ್ಸಲರ ತಂಡ ಸೀತಂಬೈಲು ಸಮೀಪ ರೇಷನ್ ಸಂಗ್ರಹಕ್ಕೆ ಬಂದಾಗ ಕೂಂಬಿಂಗ್ ಶುರುವಾಗಿದೆ. ವೇಳೆ ಪೊಲೀಸರು ಹಾಗೂ ನಕ್ಸಲರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಕಾಳಗದಲ್ಲಿ ನೇತ್ರಾವತಿ ನಕ್ಸಲ್ತಂಡದ ನೇತ್ರತ್ವ ವಹಿಸಿದ್ದ ಮೋಸ್ಟ್ವಾಂಟೆಡ್ನಕ್ಸಲ್ನಾಯಕ ವಿಕ್ರಂ ಗೌಡ ಹತನಾಗಿದ್ದಾನೆ.ಇನ್ನುಳಿದ ನಕ್ಸಲರಿಗಾಗಿ ತೀವ್ರ ಶೋಧಕಾರ್ಯ ಮುಂದುವರೆದಿದೆ ಎಂದು ವರದಿಗಳು ತಿಳಿಸಿವೆ.


ಲೋಕಸಭಾ ಚುನಾವಣೆಗೆ ದಿನಾಂಕ ಹತ್ತಿರವಾಗುತ್ತಿದ್ದಂತೆ  ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ ಭಾಗದಲ್ಲಿ ಕೆಲವು ಗ್ರಾಮಗಳಿಗೆ ನಕ್ಸಲರು ಭೇಟಿ ನೀಡಿದ ಬಗ್ಗೆ ವರದಿಯಾಗಿತ್ತು.  ಅಲ್ಲಿ ಎಎನ್ಎಫ್ಕೂಬಿಂಗ್ಆರಂಭಿಸುತ್ತಿದ್ದಂತೆ  ಅವರು ಕಾರ್ಕಳದತ್ತ ಕಾಡಿನ ದಾರಿಯಲ್ಲಿ ಪ್ರಯಾಣಿಸಿದ್ದು ಗೊತ್ತಾಗಿತ್ತು. ಬಳಿಕ 2-3 ತಿಂಗಳು ಅವರ ಚಲನವಲನದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ . ಆದರೇ ವಾರದ ಹಿಂದೆ   ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಲವೆಡೆ ನಕ್ಸಲರು ಭೇಟಿ ನೀಡಿದ ಸುಳಿವು ದೊರೆತಿತ್ತು. ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮದ ಸುಬ್ಬೆಗೌಡ ಎಂಬವರ ಮನೆಯಲ್ಲಿ 3 ಬಂದೂಕುಗಳು ಪತ್ತೆಯಾಗಿದ್ದವು. ಮನೆಗೆ ನಕ್ಸಲ್ ನಾಯಕಿ ಮುಂಗಾರು ಲತಾ ಮತ್ತು ಆಕೆಯ ತಂಡ ಭೇಟಿ ನೀಡಿರುವ ಸುಳಿವು ಸಿಕ್ಕಿತ್ತು.


ನಂತರ ನಕ್ಸಲರ್ ನಿಗ್ರಹ ಪಡೆ ಕಾರ್ಯಾಚರಣೆ ತೀವ್ರಗೊಳಿಸಿದೆ. ಅರಣ್ಯ ಒತ್ತುವರಿ ತೆರವು, ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನಕ್ಸಲರು ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಸಭೆಗಳನ್ನು ನಡೆಸಿರುವ ಶಂಕೆ ವ್ಯಕ್ತವಾಗಿತ್ತು. ಇದೇ ಕಾರಣದಿಂದ ಮಲೆನಾಡು ಹಾಗೂ ಕರವಾಳಿ ಭಾಗದ ಪಶ್ಚಿಮ ಘಟ್ಟದ ಅಂಚಿನ ಗ್ರಾಮಗಳಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಹೆಚ್ಚಾಗುತ್ತಿರುವ ಅನುಮಾನಗಳು ವ್ಯಕ್ತವಾಗಿವೆ.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top