ಕಡಬದ ಕೊಯಿಲ ಗ್ರಾಮದಲ್ಲೊಂದು ಅಪಾಯಕಾರಿ ಕಾಲು ಸಂಕ: ಜನ ನಾಯಕರೇ ಇತ್ತ ಗಮನ ಹರಿಸುವಿರಾ?

ಕಡಬದ ಕೊಯಿಲ ಗ್ರಾಮದಲ್ಲೊಂದು ಅಪಾಯಕಾರಿ ಕಾಲು ಸಂಕ: ಜನ ನಾಯಕರೇ ಇತ್ತ ಗಮನ ಹರಿಸುವಿರಾ?

Kadaba Times News
0

 ಕಡಬ ಟೈಮ್, ಕಡಬ ತಾಲೂಕಿನ ಕೊಯಿಲ  ಗ್ರಾಮದ ಕೆಮ್ಮಾರ ಬಡ್ಡಮೆ  ಎಂಬಲ್ಲಿಗೆ ತೊಡಿಗೆ ತಡೆಗೋಡೆ ನಿರ್ಮಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಬೇಕು ಎಂದು ಇಲ್ಲಿನ ಸಾರ್ವಜನಿಕರು ಅಗ್ರಹಿಸಿದ್ದಾರೆ. ಕೆಮ್ಮಾರದಿಂದ ಗಂಡಿಬಾಗಿಲು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಕಾಲು  ದಾರಿ ಮಧ್ಯೆ ಬರುವ ತೋಡಿಗೆ ತಡೆಗೋಡೆ ನಿರ್ಮಿಸಬೇಕು ಎನ್ನುವುದು ಭಾಗದ ಜನರ ಹಕ್ಕೊತ್ತಾಯವಾಗಿದೆ.


ಸುಮಾರು ಐವತ್ತಕ್ಕೂ ಹೆಚ್ಚು ಮನೆಗಳಿಗೆ ಸಲಭ ಸಂಪರ್ಕ ಕಲ್ಪಿಸುವ ಬಡ್ಡಮೆ ತೋಡಿಗೆ ಈಗಾಗಲೇ ಕೊಯಿಲ ಗ್ರಾಮ ಪಂಚಾಯಿತಿ ವತಿಯಿಂದ ಕಾಲು ಸಂಕ ನಿರ್ಮಿಸಲಾಗಿದೆ. ಇದು ತಕ್ಕಮಟ್ಟಿಗೆ ಸಾಕೆನಿಸಿದರೂ, ಕಾಲು ಸಂಕದ ಬದಿಯಲ್ಲಿ ತೋಟಗಳಿದ್ದು, ಮಳೆ ಬಂದಾಗ ಮಳೆ ನೀರೆಲ್ಲಾ ಪಕ್ಕದ ತೋಟಗಳಿಗೆ ನುಗ್ಗಿ ಅನಾಹುತ ಸೃಷ್ಠಿಯಾಗಿ ಕೃಷಿ ನಾಶವಾಗುತ್ತಿದೆ.  ಇತ್ತ ಕಾಲು ಸಂಕ ಕೂಡಾ ಮುಳುಗಡೆಯಾಗಿ ಅಪಾಯವನ್ನು ತಂದೊಡ್ಡುತ್ತದೆ.


ಇತ್ತೀಚಿನ ದಿನಗಳಲ್ಲಿ ಸಂಜೆ ವೇಳೆಗೆ ಸುರಿಯವ ಭಾರೀ ಮಳೆಯಿಂದಾಗಿ ನೀರಿನ ನೆರೆ  ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಇದೇ ಸಮಯಕ್ಕೆ ಶಾಲಾ ವಿದ್ಯಾರ್ಥಿಗಳು ಕೂಡಾ ಕಾಲು ಸಂಕವನ್ನು ಅಲವಲಂಬಿಸಿರುವುದರಿಂದ ಅಪಾಯ ಕಾದಿದೆ.



ಕಾಲು ಸಂಕದ ಕೆಳಗೆ ಭಾರೀ ಗಾತ್ರದ ಬಂಡೆಕಲ್ಲು ಇದ್ದು ಇದು ನೀರನ್ನು ತಡೆದು ನೆರೆ ನೀರಿನ ಮಟ್ಟವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲದೆ ತೋಡು ಅಗಲಕಿರಿದಾಗಿರುವುದು ಕೂಡಾ ಅಪಾಯಕ್ಕೆ ಕಾರಣವಾಗಿದೆ. ಬಂಡೆಕಲ್ಲನ್ನು ತೆರವು ಮಾಡಿ, ತೋಡನ್ನು ಅಗಲ ಮಾಡುವುದರೊಂದಿಗೆ ಇಲ್ಲಿಗೆ ತಡೆಗೋಡೆ ನಿರ್ಮಾಣ ಮಾಡಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತದೆ, ಮುಂದೆ ಆಗುವ ಅನಾಹುತ ತಪ್ಪಿಸಬಹುದಾಗಿದೆ  ಎಂದು  ಇಲ್ಲಿನ ನಾಗರೀಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಕಾಲು ಸಂಕದ ಒಂದು ಭಾಗದಲ್ಲಿ ಮಣ್ಣು ಕುಸಿತ ಉಂಟಾಗಿದ್ದು, ತಡೆಗೋಡೆ ನಿರ್ಮಾಣವಾದರೆ  ಕಾಲು  ಸಂಕಕ್ಕೆ ಆಗುವ ಅಪಾಯವನ್ನು ತಪ್ಪಿಸಬಹುದು,  ಮಳೆಹಾನಿ ಯೋಜನೆಯಲ್ಲಿ ಅನುದಾನ ನೀಡಿ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು  ಎನ್ನುವ  ಅಗ್ರಹ ವ್ಯಕ್ತವಾಗಿದೆ. ಬಗ್ಗೆ ಕೊಯಿಲ ಗ್ರಾಮ ಸಭೆಯಲ್ಲಿ ಮನವಿ ಮಾಡಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಭಾಗದ ಜನರ ಆರೋಪವಾಗಿದೆ.


ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ  ಅಂದಾಜುಪಟ್ಟಿ  ತಯಾರಿಸಿ  ಸ್ಥಳೀಯ ಶಾಸಕರ ಮುಖಾಂತರ ಅನುದಾನ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳುತ್ತಾರೆ ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಶಾಲಾಭಿವೃದ್ದಿ ಸಮಿತಿ  ಅಧ್ಯಕ್ಷ ಅಝೀಝ್ ಬಿ. ಕೆ ಅವರು .


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top