ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿ : ತಾಳಿಯನ್ನು ಮಾತ್ರ ಬಿಚ್ಚಿಟ್ಟು ಕರಿಮಣಿ ಜೊತೆ ಲಕ್ಷ ರೂ ಹೊತ್ತೊಯ್ದ ಕಳ್ಳರು

ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿ : ತಾಳಿಯನ್ನು ಮಾತ್ರ ಬಿಚ್ಚಿಟ್ಟು ಕರಿಮಣಿ ಜೊತೆ ಲಕ್ಷ ರೂ ಹೊತ್ತೊಯ್ದ ಕಳ್ಳರು

Kadaba Times News
0

ಸುಬ್ರಹ್ಮಣ್ಯ ಪೊಲೀಸ್ ಠಾಣೆ


ಕಡಬ ಟೈಮ್ಸ್,  ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಪಂಜ ಸಮೀಪದ  ಬಳ್ಪದಲ್ಲಿ ಬೀಗ ಹಾಕಲಾಗಿದ್ದ ಮನೆಯೊಂದರಿಂದ ಲಕ್ಷ ರೂಪಾಯಿ ಸಹಿತ ಚಿನ್ನ ಕಳವಾಗಿರುವ ಘಟನೆ ಬೆಳಕಿಗೆ ಬಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.20ರಂದು ಘಟನೆ ನಡೆದಿದ್ದು  ಬಳ್ಪ  ಗ್ರಾಮದ  ಅಕ್ಕೇಣಿ ಸುಂದರ ಗೌಡ ಎಂಬವರ ಮನೆಯಿಂದ ಸುಮಾರು ರೂ. 12 ಲಕ್ಷ ಮತ್ತು ಅಂದಾಜು 28 ಪವನ್ ಚಿನ್ನ ಕಳ್ಳತವಾಗಿದೆ. 


ಈ ಸುದ್ದಿಯನ್ನು ಓದಿರಿ: ದಕ್ಷಿಣ ಕನ್ನಡ: ಹನುಮಗಿರಿ ಮೇಳದ ಪ್ರಧಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇನ್ನಿಲ್ಲ


ಮನೆ ಮಂದಿ ಜೊತೆ . 17ರಂದು  ಮನೆಗೆ ಬೀಗ ಹಾಕಿ  ಮಗಳ ಮನೆ ದುರಸ್ತಿಯ ಹಿನ್ನೆಲೆಯಲ್ಲಿ ತೆರಳಿದ್ದರು. ಅಲ್ಲಿ ಕೆಲಸ ಮುಗಿಸಿ ಮತ್ತೆ ಮನೆಗೆ ಬಂದ ವೇಳೆ   ಮನೆಯ ಎದುರು ಬಾಗಿಲಿನ ಬೀಗ ಮುರಿದಿರುವುದು ಗಮನಕ್ಕೆ ಬಂದಿದೆ.


ಈ ಸುದ್ದಿಯನ್ನು ಓದಿರಿ: ಕಡಬ:ಮಗನ ಬರ್ತ್ ಡೇ ಪಾರ್ಟಿಗಾಗಿ ಕಡವೆ ಬೇಟೆ: ಕೋವಿ ಸಹಿತ ಫ್ರಿಡ್ಜ್ ನಲ್ಲಿದ್ದ ಮಾಂಸ ವಶಕ್ಕೆ


ಮನೆಯೊಳಗೆ  ನೋಡಿದಾಗ ರೂ. 12 ಲಕ್ಷ ಮತ್ತು 28 ಪವನ್ ಚಿನ್ನ ಕಾಣೆಯಾಗಿರುವುದು ತಿಳಿದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೆ  ಕರಿಮಣಿ ಸರವೊಂದರ ತಾಳಿಯನ್ನು ಬಿಚ್ಚಿಟ್ಟಿರುವುದಾಗಿ ತಿಳಿದುಬಂದಿದೆ.    ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಲೀಸರರು ತನಿಖೆ ನಡೆಸುತ್ತಿದ್ದಾರೆ.


ಕಡಬ ಟೈಮ್ಸ್  ಸುದ್ದಿ ಪಡೆಯಲು https://chat.whatsapp.com/Jywv1Rj6Yb61e72MiSU60e.

ನಿಮ್ಮೂರಿನ ಸುದ್ದಿಗಳನ್ನು 9380474819 ಸಂಖ್ಯೆಗೆ ವಾಟ್ಸಪ್ ಮಾಡಿರಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top