ಸುಬ್ರಹ್ಮಣ್ಯ: ಕೋವಿಯಂತೆ ಹೋಲುವ ವಸ್ತು ತೋರಿದ ಕಾರಿನಲ್ಲಿದ್ದ ತಂಡ: ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

ಸುಬ್ರಹ್ಮಣ್ಯ: ಕೋವಿಯಂತೆ ಹೋಲುವ ವಸ್ತು ತೋರಿದ ಕಾರಿನಲ್ಲಿದ್ದ ತಂಡ: ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

Kadaba Times News
0
ಕುಕ್ಕೆ ಸುಬ್ರಹ್ಮಣ್ಯ: ಇಲ್ಲಿನ ಕೈಕಂಬದ  ಪೆಟ್ರೋಲ್ ಪಂಪೊಂದರ  ಬಳಿ ಕಾರಿನಲ್ಲಿದ್ದ ತಂಡ ಗನ್ ನಂತೆ ಹೋಲುವ  ವಸ್ತುವೊಂದನ್ನು ಪ್ರದರ್ಶಿಸಿದ್ದು ನಾಲ್ವರನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೆ.12 ರ ಮದ್ಯಾಹ್ನ ಈ ಘಟನೆ ನಡೆದಿರುವುದುದಾಗಿದೆ. ಕೈಕಂಬದ ಜನ ವಸತಿ ಇರುವ ರಸ್ತೆಯಲ್ಲಿ ಕಾರಲ್ಲಿ  ತಂಡವೊಂದು ಬಂದಿತ್ತು .ಕೆಲ ಹೊತ್ತಿನ ಬಳಿಕ ಸ್ಟೋಟದಂತೆ ಸದ್ದು ಕೇಳಿ ಜನರು ಗಮನಿಸಿದಾಗ ಕಾರಲ್ಲಿ ಗನ್ ರೂಪದ ವಸ್ತು ತೋರಿಸುತ್ತಿರುವುದು ಕಂಡು ಬಂದಿದೆ.

ನಿರಂತರ ಸ್ಟೋಟದ ಸದ್ದು ಕೇಳಿ ಸ್ಥಳೀಯರು ಬೆಚ್ಚಿ ಬಿದ್ದಿದ್ದರು.ಇದರಿಂದ ಭಯಭೀತಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಅಲ್ಲದೆ ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ.  ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಹೊಟೇಲೊಂದರ ಸಮೀಪ ಕಾರಲ್ಲಿ ಇದ್ದವರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಯುವಕರನ್ನು ರಾತ್ರಿವರೆಗೂ  ವಿಚಾರಣೆಗೆ ಒಳಪಡಿಸಿದ್ದು ಎಲ್ಲರೂ ಸುಬ್ರಹ್ಮಣ್ಯ ಆಸುಪಾಸಿನವರು ಎಂದು ತಿಳಿದು ಬಂದಿದ್ದು  ಏರ್ ಗನ್ ಬಳಸಿರುವುದುಗಾಗಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕೋವಿ ರೂಪದ ವಸ್ತುವನ್ನು ವಶಕ್ಕೆ ಪಡೆಯಲಾಗಿದ್ದು ಯುವಕರನ್ನು ಮುಚ್ಚಳಿಕೆ ಬರೆಸಿ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.ಯಾವುದೇ ಪ್ರಕರಣ ದಾಖಲಾಗಿರುವ ಮಾಹಿತಿ ತಿಳಿದು ಬಂದಿಲ್ಲ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top