ಕಡಬದಲ್ಲಿ ಲೋಕಾಯುಕ್ತ ಪೊಲೀಸರಿಂದ ಭ್ರಷ್ಟಚಾರ ವಿರುದ್ದ ಜಾಗೃತಿ ಮಾಹಿತಿ ಕಾರ್ಯಾಗಾರ

ಕಡಬದಲ್ಲಿ ಲೋಕಾಯುಕ್ತ ಪೊಲೀಸರಿಂದ ಭ್ರಷ್ಟಚಾರ ವಿರುದ್ದ ಜಾಗೃತಿ ಮಾಹಿತಿ ಕಾರ್ಯಾಗಾರ

Kadaba Times News
0
ಕಡಬ:ಕರ್ನಾಟಕ ಲೋಕಯುಕ್ತ ಮಂಗಳೂರು ಠಾಣಾ ವತಿಯಿಂದ ಭ್ರಷ್ಟಚಾರ ವಿರುದ್ದ ಅರಿವು ಸಪ್ತಾಹ ಅಂಗವಾಗಿ ಕಡಬ ಅಂಬೇಡ್ಕರ್ ಭವನದಲ್ಲಿ  ಭ್ರಷ್ಟಚಾರ ವಿರುದ್ದ ಜಾಗೃತಿ ಮಾಹಿತಿ ಕಾರ್ಯಗಾರವು ನಡೆಯಿತು.

ಲೋಕಯುಕ್ತ ಡಿವೈಎಸ್‌ಪಿ ಡಾ.ಗಾನ ಪಿ ಕುಮಾರ್  ಅವರು ಉದ್ಘಾಟಿಸಿ , ಪ್ರಮಾಣವಚನ  ಬೋಧಿಸಿ ಮಾತನಾಡಿದರು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸಲು ಲಂಚದ ಬೇಡಿಕೆ ಇಟ್ಟಿರುವ ಬಗ್ಗೆ , ಅರ್ಜಿಗಳ ವಿಲೇವಾರಿ ಮಾಡುವಲ್ಲಿ ತಡ ಮಾಡಿದಲ್ಲಿ  ಸರ್ಕಾರಿ ಹಣದ ದುರ್ಬಳಕೆ  ಹಾಗೂ ಇನ್ನಿತರ ಭ್ರಷ್ಟಚಾರಕ್ಕೆ ಸಂಬಂಧಿಸಿದ  ದೂರುಗಳಿದಲ್ಲಿ ನೇರವಾಗಿ ಲೋಕಾಯುಕ್ತ ಸಂಸ್ಥೆಯನ್ನು ಸಂಪರ್ಕಿಸಿ ದೂರು ನೀಡಬಹುದು .

ಸರ್ಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಚಾರದಿಂದ   ಸಾರ್ವಜನಿಕರಿಗೆ ತೊಂದರೆ ಉಂಟಾದಲ್ಲಿ   ಲೋಕಯುಕ್ತ ಸಂಸ್ಥೆಗೆ ಸಾರ್ವಜನಿಕರು ಮುಕ್ತವಾಗಿ ದೂರು ನೀಡಿದಲ್ಲಿ ತಮ್ಮ ಮಿತಿಯೊಳಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಭ್ರಷ್ಟಚಾರದ ವಿರುದ್ದವಿರುವ  ಲೋಕಯುಕ್ತದ ಕಾರ್ಯದೊಂದಿಗೆ  ಸಾರ್ವಜನಿಕರು ಕೈ ಜೋಡಿಸಿದಲ್ಲಿ ಭ್ರಷ್ಟಚಾರ ಮುಕ್ತ ಸಮಾಜ ನಿರ್ಮಾಣ ಮಾಡಬಹುದು ಎಂದು   ಹೇಳಿದರು. 
  
ಲೋಕಯುಕ್ತ ಎಸ್ ಐ ಸುರೇಶ್,ಎಸ್ ಕೆ ಆರ್ ಡಿ ಪಿ  ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಉಪಸ್ಥಿತರಿದ್ದರು. ಲೋಕಯುಕ್ತ ಎಸ್ ಐ ಚಂದ್ರಶೇಖರ, ಸಿಬ್ಬಂದಿ ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು. ಕಡಬ ಪೊಲೀಸ್ ಠಾಣಾ ಹೆಡ್‌ಕಾನ್ಸ್ಟೇಬಲ್ ಹರೀಶ್   ಸಹಕರಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top