ಸವಣೂರು:ಟ್ರಿಪ್ ಗೆ ಹೋಗಿದ್ದ ವೇಳೆ ಮನೆ ಬೀಗ ಮುರಿದು ಚಿನ್ನಾಭರಣ ಸಹಿತ ಬೆಲೆಬಾಳುವ ವಸ್ತುಗಳನ್ನು ದೋಚಿದ ಕಳ್ಳರು

ಸವಣೂರು:ಟ್ರಿಪ್ ಗೆ ಹೋಗಿದ್ದ ವೇಳೆ ಮನೆ ಬೀಗ ಮುರಿದು ಚಿನ್ನಾಭರಣ ಸಹಿತ ಬೆಲೆಬಾಳುವ ವಸ್ತುಗಳನ್ನು ದೋಚಿದ ಕಳ್ಳರು

Kadaba Times News
0

 


ಸವಣೂರು:ಮನೆ ಮಂದಿ ಟ್ರಿಪ್ ಗೆ ಹೋಗಿದ್ದ ವೇಳೆ  ಮನೆಯೊಳಗೆ  ನುಗ್ಗಿದ  ಕಳ್ಳರು ಚಿನ್ನಾಭರಣ ಸಹಿತ ಬೆಲೆಬಾಳುವ ವಸ್ತುಗಳನ್ನು ಕೊಂಡೊಯ್ದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರಿನಲ್ಲಿ ನಡೆದಿದೆ.


ಸಲೀಂ ಕೆ ಎಂಬವರು ಅ.11ರಂದು  ಮನೆಗೆ ಬೀಗ ಹಾಕಿ, ಪತ್ನಿ ಹಾಗೂ ಮಕ್ಕಳೊಂದಿಗೆ ಟ್ರಿಪ್ ಗೆಂದು ಹೋಗಿದ್ದು, ಅ.13 ರಂದು  ಮದ್ಯರಾತ್ರಿ ಮನೆಗೆ ಬಂದಾಗ ಮನೆಯ ಎದುರುಗಡೆಯ ಬಾಗಿಲಿಗೆ ಅಳವಡಿಸಿದ್ದ ಬೀಗವು ಮುರಿದಿರುವುದು ಕಂಡುಬಂದಿದೆ.


ಮನೆಯೊಳಗೆ ಒಳಪ್ರವೇಶಿಸಿ ಮಲಗುವ ಕೋಣೆಗಳನ್ನು ನೋಡಿದಾಗ, ಅಲ್ಲಿದ್ದ ಗೋಡ್ರೆಜಿನ ಬಾಗಿಲು ಮುರಿದಿದ್ದು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ನೆಲದಲ್ಲಿ ಹರಡಿದ್ದು ಕಂಡು ಬಂದಿತ್ತು.  ಗೋಡ್ರೆಜಿನಲ್ಲಿದ್ದ 53 ಗ್ರಾಂ ಚಿನ್ನದ ಆಭರಣಗಳು  ( ಅಂದಾಜು ಮೌಲ್ಯ 2,12,000), ಸಾಕ್ಸಿಂಗ್ ಕಂಪೆನಿಯ ಟಾಬ್ -1 ( ಅಂದಾ ಜು ಮೌಲ್ಯ ರೂ 4000) TISSOT ವಾಚ್ -1 (ಅಂದಾಜು ಮೌಲ್ಯ ರೂ 15000) ಹಾಗೂ ನಗದು ಸುಮಾರು 30,000 ರೂ. ಹಣ ಕಳವು ಆಗಿರುವುದಾಗಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.


ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ .ಕ್ರ . 80/2024 ಕಲಂ 331(3),331(4),305ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top