ಕಳ್ಳಬಟ್ಟಿ ಅಡ್ಡೆಗೆ ದಾಳಿ ಅಬಕಾರಿ ಪೊಲೀಸರ ಅಪರೂಪದ ದಾಳಿ:ಕಳ್ಳಬಟ್ಟಿ ತಯಾರಿಸುವ ಪರಿಕರ ವಶಕ್ಕೆ

ಕಳ್ಳಬಟ್ಟಿ ಅಡ್ಡೆಗೆ ದಾಳಿ ಅಬಕಾರಿ ಪೊಲೀಸರ ಅಪರೂಪದ ದಾಳಿ:ಕಳ್ಳಬಟ್ಟಿ ತಯಾರಿಸುವ ಪರಿಕರ ವಶಕ್ಕೆ

Kadaba Times News
0

 

ಅಬಕಾರಿ ಪೊಲೀಸರು ದಾಳಿ ಮಾಡಿದ ವೇಳೆ ಪತ್ತೆಯಾದ ವಸ್ತು

ದಕ್ಷಿಣ ಕನ್ನಡ: ಕಳ್ಳಬಟ್ಟಿ ಸಾರಾಯಿ ತಯಾರಿಸಲು ಸಿದ್ದತೆ ಮಾಡಿಕೊಂಡಿದ್ದ ಸ್ಥಳಕ್ಕೆ ಅಬಕಾರಿ ಪೊಲೀಸರು ದಾಳಿ ಮಾಡಿರುವ ಘಟನೆ ಧರ್ಮಸ್ಥಳ ಠಾಣಾ ವ್ಯಾಪ್ತಿಯಿಂದ ವರದಿಯಾಗಿದೆ.


ಬೆಳ್ತಂಗಡಿ ತಾಲೂಕು  ಕನ್ಯಾಡಿ ಗ್ರಾಮದ ಗುರಿಪಳ್ಳ ಎಂಬಲ್ಲಿ ಪ್ರವೀಣ್ ರೋಡ್ರಿಗಸ್ ಎಂಬಾತನ ಮನೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿರುವುದಾಗಿ ತಿಳಿದು ಬಂದಿದೆ.   


ಈ ವೇಳೆ  ಮನೆಯಲ್ಲಿ ಅಕ್ರಮವಾಗಿ ತಯಾರಿಸಿ ಪ್ಲಾಸ್ಟಿಕ್ಕ್ಯಾನ್ನಲ್ಲಿ ಸಂಗ್ರಹಿಸಿಟ್ಟಿದ್ದ 18.75 ಲೀ. ಕಳ್ಳಬಟ್ಟಿ ಸಾರಾಯಿಯನ್ನು ಹಾಗೂ ಕಳ್ಳಬಟ್ಟಿ ತಯಾರಿಸಲು ಪ್ಲಾಸ್ಟಿಕ್ಡ್ರಮ್ನಲ್ಲಿ ಶೇಖರಿಸಿ ಇಟ್ಟಿರುವ 37ಲೀ. ವಾಶ್ ಅನ್ನು ಮತ್ತು ಕಳ್ಳಬಟ್ಟಿ ತಯಾರಿಸುವ ಪರಿಕರಗಳನ್ನು ಜಪ್ತಿ ಪಡಿಸಿಕೊಂಡಿದ್ದಾರೆ.

 

ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top