ಕುಕ್ಕೆ ಸುಬ್ರಹ್ಮಣ್ಯ:ಸ್ನಾನಘಟ್ಟದ ಬಳಿ ನದಿಗಿಳಿದು ಆತ್ಮಹತ್ಯೆಗೆ ಯತ್ನಿಸಿದ ವೃದ್ದನ ಜೀವ ಉಳಿಸಿದ ದೇಗುಲದ ಭದ್ರತಾ ಸಿಬ್ಬಂದಿ

ಕುಕ್ಕೆ ಸುಬ್ರಹ್ಮಣ್ಯ:ಸ್ನಾನಘಟ್ಟದ ಬಳಿ ನದಿಗಿಳಿದು ಆತ್ಮಹತ್ಯೆಗೆ ಯತ್ನಿಸಿದ ವೃದ್ದನ ಜೀವ ಉಳಿಸಿದ ದೇಗುಲದ ಭದ್ರತಾ ಸಿಬ್ಬಂದಿ

Kadaba Times News
0

 

ಸುಬ್ರಹ್ಮಣ್ಯ ಠಾಣೆ ಎದುರು ವೃದ್ದ ಮತ್ತು ಅವರ ಮಕ್ಕಳು

ಕುಕ್ಕೆ ಸುಬ್ರಮಣ್ಯ: ಇಲ್ಲಿನ ಕುಮಾರಧಾರ ಸ್ನಾನಘಟ್ಟದ ಬಳಿ  ವೃದ್ದರೊಬ್ಬರು ನದಿಗಿಳಿದು ಆತ್ಮಹತ್ಯೆಗೆ ಯತ್ನಿಸಿದ್ದು ದೇಗುಲದ ಭದ್ರತಾ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಜೀವ ಬದುಕುಳಿದಿದೆ.


 ಅ.18 ರ ಶುಕ್ರವಾರ ಮುಂಜಾನೆ  ಸುಮಾರು 8:30 ಹೊತ್ತಿಗೆ ವೃದ್ದರೊಬ್ಬರು ನದಿ ನೀರಿನಲ್ಲಿ ಕೊಚ್ಚಿಹೋಗುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ ,ಕೂಡಲೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳು ರಕ್ಷಣೆಗೆ ಧಾವಿಸಿದ್ದಾರೆ. ರಕ್ಷಣೆ ವೇಳೆ  “ನನ್ನನ್ನು ಸಾಯಲು ಬಿಡಿ ಯಾಕೆ ರಕ್ಷಣೆ ಮಾಡ್ತಿರಿ” ಎಂದು ವೃದ್ದ ಬೊಬ್ಬೆ ಹೊಡೆದಿರುವುದಾಗಿ ರಕ್ಷಣೆಗೆ ಮುಂದಾದವರು ತಿಳಿಸಿದ್ದಾರೆ.

 

ಕೂಡಲೇ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಿಸಲಾಗಿದೆ.ಈ ಸಂದರ್ಭ ಬೆಂಗಳೂರು ನಿವಾಸಿ ಕೃಷ್ಣಮೂರ್ತಿ ಎಂಬುದು ಗೊತ್ತಾಗಿದೆ.ಅಲ್ಲದೆ  ಮನೆ ವಿಚಾರವಾಗಿ ಮನಸ್ತಾಪಗೊಂಡು ಹತ್ತು ದಿನಗಳ ಹಿಂದೆ ಮನೆಬಿಟ್ಟು ಕುಕ್ಕೆಯತ್ತ ಬಂದಿದ್ದರು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.


ಸಾಯಂಕಾಲದ ವೇಳೆ ಮನೆಯವರು ಬಂದು ವೃದ್ದನನ್ನು ಮನೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ. ರಕ್ಷಣಾ ಕಾರ್ಯದಲ್ಲಿ ದೇಗುಲದ  ಭದ್ರತಾ ಸಿಬ್ಬಂದಿ ಲೋಕನಾಥ್,  ಸ್ಥಳೀಯರಾದ ಗೋಪಾಲ, ಕೊಕ್ಕಡ ಬಾಬು ಭಾಗಿಯಾಗಿದ್ದರು. ಸಕಾಲಕ್ಕೆ ನದಿಗಳಿದು ವೃದ್ದನ ಪ್ರಾಣ ಕಾಪಾಡಿದ ತಂಡಕ್ಕೆ  ಸಾರ್ವಜನಿಕರಿಂದ  ಮೆಚ್ಚುಗೆ ವ್ಯಕ್ತವಾಗಿದೆ.


ಸಂಜೆ ಹೊತ್ತಿಗೆ ಅವರ ಮಕ್ಕಳು ಆಗಮಿಸಿ ಕೃಷ್ಣಮೂರ್ತಿ ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ತಕ್ಷಣಕ್ಕೆ ವೃದ್ಧ ನನ್ನ ರಕ್ಷಣೆ ಮಾಡಿದ ಭದ್ರತಾ ಸಿಬ್ಬಂದಿ ಅವರ ಬಗ್ಗೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top