


ಕಡಬ ಟೈಮ್ಸ್, ಕಡಬ: ನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ಈ ಹಿನ್ನಲೆಯಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಅ.11 ರಂದು ಸಾಯಂಕಾಲ ಆಯುಧ ಪೂಜೆಯು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.
ಠಾಣೆಯಲ್ಲಿನ ವಾಹನ, ಪಿಸ್ತೂಲ್,ಕೋವಿ ಹಾಗೂ ಇತರ ವಸ್ತುಗಳಿಗೆ ಆಯುಧ ಪೂಜೆ ನೆರವೇರಿತು.ಪ್ರಸಾದ ಕೆದಿಲಾಯರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಕರ್ತವ್ಯ ನಿರ್ವಹಿಸುವ ವೇಳೆ ಸದಾ ಖಾಕಿಯಲ್ಲಿ ಕಾಣುತ್ತಿದ್ದ ಪೊಲೀಸರು ಇಂದು ಎಸ್.ಐ ಅಭಿನಂದನ್ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಸಾಂಪ್ರದಾಯಿಕ ಉಡುಗೆ ಧರಿಸಿ ಸಂಭ್ರಮಿಸಿದರು.
ಪೊಲೀಸ್ ಸಿಬ್ಬಂದಿಗಳ ಕುಟುಂಬಸ್ಥರು ಸಹ ಹಬ್ಬದ ಸಡಗರದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಪತ್ರಕರ್ತರು, ಸಾಮಾಜಿಕ ಮುಂದಾಳುಗಳು, ವರ್ತಕರು ಸೇರಿದಂತೆ ಅನೇಕರು ಆಗಮಿಸಿದ್ದರು.
ಪೊಲೀಸ್ ಠಾಣೆ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡು ಕಂಗೊಳಿಸುತ್ತಿತ್ತು.