KSRTC ಬಸ್ಸಿನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

KSRTC ಬಸ್ಸಿನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

Kadaba Times News
0

Photo Credit:Google


ಕಡಬ ಟೈಮ್ಸ್,  ಕರ್ನಾಟಕ: ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ತೆರಳಲು ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ 7 ತಿಂಗಳ ಗರ್ಭಿಣಿಗೆ ಬಸ್ನಲ್ಲೇ ಹೆರಿಗೆಯಾಗಿ, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.


ಕನಕಪುರ ತಾಲೂಕಿನ ಹುಣಸನಹಳ್ಳಿಯ ಗರ್ಭಿಣಿ ಮಹಿಳೆ ರಜಿಯಾ ಎಂಬವರು  ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆಗೆ ಪತಿ ಹಾಗೂ ತಾಯಿಯೊಂದಿಗೆ ಬಸ್ನಲ್ಲಿ ಹೊರಟಿದ್ದಾಗಲೇ ಒಂದು ಗಂಡು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.


ತಾಯಿ ಮತ್ತು ಮಕ್ಕಳನ್ನು ಬಸ್ನಲ್ಲಿ ಆಸ್ಪತ್ರೆಗೆ ಕರೆತಂದಿದ್ದು ಆಸ್ಪತ್ರೆ ಸಿಬಂದಿ ಮಕ್ಕಳನ್ನು ಆರೈಕೆ ಮಾಡಿದ್ದಾರೆ. ಅವಧಿಗೆ ಮುನ್ನ ಜನಿಸಿದ 2 ಮಕ್ಕಳು ತೂಕ ಕಡಿಮೆ ಇರುವುದರಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿದೆ.


ರಜಿಯಾ ಭಾನುಗೆ 6 ಮತ್ತು 3 ವರ್ಷದ ಎರಡು ಹೆಣ್ಣು ಮಕ್ಕಳಿದ್ದು, ಎರಡು ಮಕ್ಕಳು ಸಹ ಏಳು ತಿಂಗಳಿಗೆ ಜನಿಸಿರುವುದು ವಿಶೇಷವಾಗಿದೆ.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top