ಕಡಬ:ಮಣ್ಣು ಪಾಲಾದ ಸುಳ್ಯ ಶಾಸಕಿಯವರ ತುರ್ತು ಅನುದಾನ:ಬೇಜವಾಬ್ದಾರಿ ಯಾರದ್ದು?

ಕಡಬ:ಮಣ್ಣು ಪಾಲಾದ ಸುಳ್ಯ ಶಾಸಕಿಯವರ ತುರ್ತು ಅನುದಾನ:ಬೇಜವಾಬ್ದಾರಿ ಯಾರದ್ದು?

Kadaba Times News
0

 ಕಡಬ :  ಕಡಬ-ಸುಳ್ಯ ಉಭಯ ತಾಲೂಕಿನ ಸುತ್ತಮುತ್ತಲಿನ ವ್ಯಾಪ್ತಿಯಲ್ಲೆ ಕೆಲ ದಿನಗಳಿಂದ ಮತ್ತೆ ಮಳೆ ಮುಂದುವರಿದಿದ್ದು, ಎಡಮಂಗಲ ಸಮೀಪದಲ್ಲಿ ಮೋರಿ ಮಣ್ಣು ಕುಸಿದು ಸಂಪರ್ಕ ಕಡಿತಗೊಂಡಿದೆ.

ಕುಸಿದಿರುವ ರಸ್ತೆ


ಆ. 13 ರಂದು ಸುರಿದ ರಣಭೀಕರ ಮಳೆಗೆ ಎಡಮಂಗಲ ಗ್ರಾಮದ ಮುಖ್ಯ ರಸ್ತೆಯ ಮಾಲೆಂಗಿರಿ ಸೇತುವೆಯ ಅಡಿಭಾಗ ಕುಸಿದು ಎಡಮಂಗಲ ಸಂಪರ್ಕ ಕಡಿತಗೊಂಡಿದ್ದು, ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯ ಆ. 20ರಿಂದ ಆರಂಭಗೊಂಡು ಪೂರ್ಣವಾಗಿತ್ತು.



ಇದೀಗ ನಿರಂತರ ಮಳೆಗೆ ಮೋರಿಯ ಮಣ್ಣು ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ವಾಹನ ಸಂಚಾರವನ್ನು ಮತ್ತೆ ನಿರ್ಬಂಧಿಸಲಾಗಿದೆ. ಇದರಿಂದ ಭಾಗದ ಜನರು ಸುತ್ತು ಬಳಸಿ ಸಂಚರಿಸಬೇಕಾಗಿದೆ.

ಅಲೆಕ್ಕಾಡಿ ಭಾಗದಿಂದ ಎಡಮಂಗಲ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ಸಂಪರ್ಕ ಕಡಿತದ ಬಳಿಕ ಎಡಮಂಗಲ ದ್ವೀಪದಂತಾಗಿತ್ತು. ಶಾಸಕಿ ಕು. ಭಾಗೀರಥಿ ಮುರುಳ್ಯರವರು ತಾತ್ಕಾಲಿಕ ಸಂಪರ್ಕಕ್ಕೆ ರೂ. 1 ಲಕ್ಷ ಮತ್ತು ಶಾಶ್ವತ ಸೇತುವೆ ನಿರ್ಮಾಣಕ್ಕೆ ರೂ. 50 ಲಕ್ಷ ಅನುದಾನ ನೀಡುವುದಾಗಿ ಪ್ರಕಟಿಸಿದ್ದರು.  ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಸಂಪರ್ಕದ ಕೆಲಸ ಆರಂಭಗೊಂಡಿತ್ತು .

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top