ಕಡಬ:ಬಸ್ ನಿಲ್ದಾಣದ ಬಳಿ ರಾತ್ರಿ ವೇಳೆ ಬೈಕ್ ಸವಾರನಿಗೆ ಕಾಣ ಸಿಕ್ತು ಚಿರತೆ: ಹೆಜ್ಜೆ ಗುರುತು ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ

ಕಡಬ:ಬಸ್ ನಿಲ್ದಾಣದ ಬಳಿ ರಾತ್ರಿ ವೇಳೆ ಬೈಕ್ ಸವಾರನಿಗೆ ಕಾಣ ಸಿಕ್ತು ಚಿರತೆ: ಹೆಜ್ಜೆ ಗುರುತು ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ

Kadaba Times News
0

ಕಡಬ ಟೈಮ್: ಪಂಜದ ಕಂರ್ಬು ನೆಕ್ಕಿಲ ಎಂಬಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಸಾಕು ನಾಯಿಗಳು ನಾಪತ್ತೆಯಾಗಿ ಚಿರತೆ  ಕೊಂಡೊಯ್ದಿರಬಹುದೆಂಬ  ಅನುಮಾನ ವ್ಯಕ್ತವಾಗಿತ್ತು.  ಇದೀಗ .30 ಮತ್ತು ಸೆ.1 ರಂದು ಇದೇ ಪರಿಸರದಲ್ಲಿ  ಚಿರತೆ ಪ್ರತ್ಯಕ್ಷವಾಗಿದೆ.


.30 ರಂದು ರಾತ್ರಿ ಸುಮಾರು 8.30 ಹೊತ್ತಿಗೆ ಬೊಳ್ಳಾಜೆಯ ನವನೀತ್ ಎಂಬವರು ಬೈಕ್ ನಲ್ಲಿ ಹೋಗುತ್ತಿದ್ದಾಗ ಪಂಜ-ಕಡಬ ರಸ್ತೆಯ ಕಂರ್ಬು ನೆಕ್ಕಿಲ ಬಸ್ ತಂಗುದಾಣ ಬಳಿ ಚಿರತೆ ಕಾಣಲು ಸಿಕ್ಕಿದೆ.



ಸೆ.1 ರಂದು ಸಂಜೆ ಬೊಳ್ಳಾಜೆ ತೀರ್ಥೇಶ್ ಎಂಬವರ ಮನೆ ಸಮೀಪದಲ್ಲೇ ಚಿರತೆ ಓಡಿ ಹೋಗಿರುವುದನ್ನು ಮನೆಯವರು ನೋಡಿರುವುದಾಗಿ ತಿಳಿಸಿದ್ದಾರೆ.


ವಿಷಯ ತಿಳಿದು ಸೆ.2 ರಂದು ಬೊಳ್ಳಾಜೆಗೆ ಅರಣ್ಯ ಇಲಾಖೆಯವರು ಭೇಟಿ ನೀಡಿ ಹೆಜ್ಜೆ ಗುರುತು ಪರಿಶೀಲನೆ ನಡೆಸಿದ್ದಾರೆ. ಕಳೆದ ವಾರ ಕಂರ್ಬು ನೆಕ್ಕಿಲ ರಾಮಚಂದ್ರ ಭಟ್ ರವರ ಎರಡು ನಾಯಿಗಳು ಒಂದೇ ದಿನ ನಾಪತ್ತೆಯಾಗಿವೆ. ಪಕ್ಕದ ಮನೆಯ ಧನಂಜಯ ರವರ ಒಂದು ನಾಯಿ ನಾಪತ್ತೆಯಾಗಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top