




ಕಡಬ ಟೈಮ್ಸ್ (KADABA TIMES): ರಾಜ್ಯ ಸರ್ಕಾರಿ ನೌಕರರು ಒಂದು ಬಾರಿ ಪಡೆಯಬಹುದಾದ ಗರಿಷ್ಠ ಸಾಂದರ್ಭಿಕ ರಜೆಯನ್ನು 5 ದಿನಗಳಿಗೆ, ಸಾರ್ವತ್ರಿಕ ರಜೆಯೊಂದಿಗೆ ಸಂಯೋಜಿಸಿದಾಗ ಈ ಅವಧಿಯನ್ನು 8 ದಿವಸಗಳಿಗೆ ನಿರ್ಬಂಧಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಜಿ.ಜಿ.ಹೇಮಣ್ಣ ಅವರು ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ 15 ದಿವಸಗಳ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಆದೇಶಿಸಲಾಗಿತ್ತು. ನಂತ್ರ 15 ದಿನಗಳ ಸಾಂದರ್ಭಿಕ ರಜೆಯನ್ನು 10 ದಿವಸಗಳಿಗೆ ಇಳಿಸಿ ಆದೇಶಿಸಲಾಗಿದೆ.

ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ಅನುಬಂಧ-ಬಿ ನಿಯಮ(1)ರ ಅನ್ವಯ 15 ದಿನಗಳ ಸಾಂದರ್ಭಿಕ ರಜೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಒಂದು ಬಾರಿಗೆ ಪಡೆಯ ಬಹುದಾದ ಗರಿಷ್ಠ ಸಾಂದರ್ಭಿಕ ರಜೆಯ ಮಿತಿಯನ್ನು 7 ದಿನಗಳಿಗೆ ಸೀಮಿತಗೊಳಿಸಿ, ಸಾರ್ವತ್ರಿಕ ರಜೆಯೊಂದಿಗೆ ಸಂಯೋಜಿಸಿದಾಗ ಈ ಅವಧಿಯನ್ನು 10 ದಿವಸಗಳಿಗೆ ನಿರ್ಭಂದಿಸಿ ಅವಕಾಶ ಕಲ್ಪಿಸಲಾಗಿತ್ತು.