




ಕಡಬ ಟೈಮ್ಸ್ (KADABA TIMES):ಕಡಬ ತಾಲೂಕಿನ ಪ್ರಸಿದ್ಧ ಯಾತ್ರಾಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಶಾಸಕ ಎಸ್. ಅಂಗಾರ ರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
ಕಳೆದವಾರ ಬಂದ ಆದೇಶದಲ್ಲಿ ಶಾಸಕರ ಹೆಸರು ಹೆಸರು ಬಿಟ್ಟುಹೋಗಿತ್ತು.ಬೇರೊಬ್ಬರನ್ನು ನೇಮಿಸುವ ಬಗ್ಗೆ ಪ್ರಸ್ತಾಪವೂ ಆಗಿತ್ತು.

ಬಳಿಕ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಿ ಪರಿಷ್ಕೃತ ಆದೇಶ ಹೊರಡಿಸುವುದಾಗಿ ಧಾರ್ಮಿಕ ದತ್ತಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದರು. ಈಗ ನ.7 ರಂದು ಪರಿಷ್ಕೃತ ಆದೇಶ ಹೊರಬಂದಿದೆ.