ನೆಲ್ಯಾಡಿ -ಕೊಕ್ಕಡ ಪರಿಸರದಲ್ಲಿ ಕಾಣ ಸಿಗುತ್ತಿದ್ದ CID ಶಂಕರ್ ಇನ್ನು ನೆನಪು ಮಾತ್ರ

ನೆಲ್ಯಾಡಿ -ಕೊಕ್ಕಡ ಪರಿಸರದಲ್ಲಿ ಕಾಣ ಸಿಗುತ್ತಿದ್ದ CID ಶಂಕರ್ ಇನ್ನು ನೆನಪು ಮಾತ್ರ

Kadaba Times News
0

ಕಡಬ ಟೈಮ್ಸ್ (KADABA TIMES):ಕೊಕ್ಕಡ-ನೆಲ್ಯಾಡಿ- ಅರಸಿನಮಕ್ಕಿ -ರೆಖ್ಯಾ ಪರಿಸರದಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬರು ಸೋಮವಾರ ನಿಧನರಾಗಿದ್ದಾರೆ.

ಮೃತ ವ್ಯಕ್ತಿಯ ಹೆಸರು ಶಂಕರ್. ಸುಮಾರು 25 ವರ್ಷಗಳಿಗೂ ಅಧಿಕಕಾಲದಿಂದ ಈ ಭಾಗದಲ್ಲಿ ತಿರುಗಾಡುತ್ತಾ ಇಲ್ಲಿನ ಜನರು ನೀಡಿದ ತಿಂಡಿ ತಿನಸು ತಿನ್ನುತ್ತಾ, ಯಾರಿಗೂ ತೊಂದರೆ ತನ್ನಷ್ಟಕ್ಕೆ ಇರುತ್ತಿದ್ದರು.

ಇವರು ನೆಲ್ಯಾಡಿಗೆ ಬಂದ ಆರಂಭಿಕ ದಿನಗಳಲ್ಲಿ ಇವರ ಬಗ್ಗೆ ಇಲ್ಲಿ ಯಾವುದೋ ಮರ್ಡರ್ ಆಗಿದೆ ಅದಕ್ಕೆ ಪೋಲಿಸ್ ಇಲಾಖೆ ಆರೋಪಿಯನ್ನು ಹಿಡಿಯುವ ಸಲುವಾಗಿ ಮಾರುವೇಷದಲ್ಲಿ ಇವರನ್ನು ಕಳುಹಿಸಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು.ಅಲ್ಲದೆ ಇವರನ್ನು ಸಿಐಡಿ ಶಂಕರ್ ಎಂದೇ ಕರೆಯುತ್ತಿದ್ದರು.

ಕೈಯಲ್ಲೊಂದು ಕೋಲು ಮೈ ತುಂಬಾ ಕೆಸರು ಮೆತ್ತಿಕೊಂಡ ಸದೃಡ ಮೈಕಟ್ಟು ಇವರನ್ನು ಅದೇ ರೀತಿಯಲ್ಲಿ ಬಿಂಬಿಸಿತ್ತು.ಹೀಗಾಗಿ ಜನರೂ ಭಯ ಪಡುತ್ತಿದ್ದರು.

ಬಹಳ ವರ್ಷಗಳ ಈ ಭಾಗದ ಒಡನಾಟದ ಬಳಿಕ ಅನಾರೋಗ್ಯದ ಕಾರಣ ನಿಧನಹೊಂದಿದ್ದಾರೆ. ಇನ್ನು ಶಂಕರ್ ನೆನಪು ಮಾತ್ರ.ಅವರ ಆತ್ಮಕ್ಕೆ ಶಾಂತಿ ಸಿಗಲಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top