




ಕಡಬ ಟೈಮ್ಸ್ (KADABA TIMES):ಕಡಬ ಬ್ಲಾಕ್ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಸಭೆಯು ಅ. 29ರಂದು ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಸಭಾಭವನದಲ್ಲಿ ನಡೆದಿದೆ.
ಕಡಬ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಗಣೇಶ್ ಕೈಕುರೆ ಅವರ ಅದ್ಯಕ್ಷ ತೆಯಲ್ಲಿ ನಡೆದಿದೆ.ಈ ಸಂದರ್ಭದಲ್ಲಿ ಮಾತನಾಡಿ ಮುಂದಿನ ಸ್ಥಳೀಯಾಡಳಿತ ಚುನಾವಣೆಯಲ್ಲಿ ಪ್ರತೀ ಗ್ರಾಮ ಪಂಚಾಯತ್ ಗಳಲ್ಲಿ ನಮ್ಮ ಅಭ್ಯರ್ಥಿ ಗಳು ಗೆಲ್ಲುವಂತೆ ಪದಾಧಿಕಾರಿಗಳು ಗಮನ ಹರಿಸುವಂತೆ ಸೂಚಿಸಿದರು.

ಕಡಬ ಬ್ಲಾಕ್ ನ ಉಸ್ಥುವಾರಿ ನಂದಕುಮಾರ್ ಮಡಿಕೇರಿಯವರು ಮಾತನಾಡಿ ಪಕ್ಷ ನಮಗೇನು ಕೊಟ್ಟಿದೆ ಎಂಬು ದಕ್ಕಿಂತ ಪಕ್ಷ ಕ್ಕಾಗಿ ನಾವೇನು ಮಾಡಿದ್ದೇವೆ ಎಂಬುದರ ಬಗ್ಗೆ ಚಿಂತಿಸಿ ಪಕ್ಷ ದಲ್ಲಿ ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರೂ ಅವರನ್ನು ಗೆಲ್ಲಿಸುವ ಕೆಲಸ ನಮ್ಮದಾಗಬೇಕೆಂದರು. ಕಡಬ ಜಿ .ಪಂ ಸದಸ್ಯ ಪಿ.ಪಿ ವರ್ಗೀಸ್ ,ನೆಲ್ಯಾಡಿ ಜಿ ಪಂ ಸದಸ್ಯ. ಸರ್ವೋತ್ತಮ ಗೌಡ ಸೇರಿದಂತೆ ವಿವಿಧ ಭಾಗದ ಪಕ್ಷದ ಉಸ್ತುವಾರಿಗಳು, ಕಾರ್ಯಕರ್ತರು ಸಭೆಯಲ್ಲಿ ಹಾಜರಿದ್ದರು.