




ಕಡಬ ಟೈಮ್ಸ್ (KADABA TIMES):ಪಂಜ ಸಮೀಪದ ನಿಂತಿಕಲ್ಲು ಎಣ್ಮೂರಿನ ದೇವಿಪ್ರಸಾದ್ ಎಂಬುವರು ಇಲಿಜ್ವರ, ಕಿಡ್ನಿ ಸಂಬಂಧಿ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆ, ಟಿ.ಬಿ. ಸೇರಿದಂತೆ ಅನೇಕ ಖಾಯಿಲೆಯಿಂದ ಬಳಲುತ್ತಿದ್ದಾರೆ.
ಇವರು ತನ್ನ ಜೀವನ ನಡೆಸಲು ತಿಂಡಿ ವ್ಯಾಪಾರ ಮಾಡಿಕೊಂಡು ಸಂಸಾರ ಮುನ್ನಡೆಸುತ್ತಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಕೆಲಸವನ್ನು ಮಾಡಲಾಗದೆ ಕಳೆದ 15 ದಿನಗಳಿಂದ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯರ ಹೇಳಿಕೆಯ ಪ್ರಕಾರ ಚಿಕಿತ್ಸೆಗೆ ಸುಮಾರು 3 ಲಕ್ಷ ಖರ್ಚು ತಗಲುವುದರಿಂದ ವೆಚ್ಚವನ್ನು ಭರಿಸಲು ಅವರ ಕುಟುಂಬಕ್ಕೆ ಕಷ್ಟಸಾಧ್ಯವಾಗಿದೆ.
ಇವರ ಕಷ್ಟಕ್ಕೆ ಸಹೃದಯಿಗಳಾದ ತಾವುಗಳು ಸ್ಪಂದಿಸಬೇಕಾದ ಅಗತ್ಯವಿದ್ದು, ಶೀಘ್ರ ಗುಣಮುಖರಾಗುವಲ್ಲಿ ಸಹಕರಿಸಬೇಕಾಗಿದೆ.

ಧನಸಹಾಯ ಮಾಡಲಿಚ್ಚಿಸುವ ಸಹೃದಯಿಗಳು ಅವರ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬಹುದು.
ಸಂಪರ್ಕ ಸಂಖ್ಯೆ : 9008517008.
ACCOUNT NUMBER 1600101005393 ( ಶ್ರೀಮತಿ ಜಯಂತಿ, ದೇವಿಪ್ರಸಾದರ ಪತ್ನಿ)
IFSC CODE: CNRB0001600
Branch: YENMURU BRANCH