




ಕಡಬ ಟೈಮ್ಸ್ (KADABA TIMES): ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಹೊಸಮಠ ನೂತನ ಸೇತುವೆಯ ರಸ್ತೆ ತುದಿಯಲ್ಲಿ ಬೃಹದಾಕಾರಾದ ಹೊಂಡವೊಂದು ನಿರ್ಮಾಣವಾಗಿದ್ದು ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿದೆ.
ಹೆಲ್ಮೆಟ್ ಕಡ್ಡಾಯ ಸುತ್ತೋಲೆಯ ಬೆನ್ನಲ್ಲೇ ರಸ್ತೆಗಳ ಅವ್ಯವಸ್ಥೆಗಳ ಬಗ್ಗೆ ಚರ್ಚೆಯಾಗುತ್ತಿದ್ದು ಈ ನಡುವೆ ಹೊಸಮಠದಲ್ಲಿರುವ ರಸ್ತೆ ಗುಂಡಿ ವಿಚಾರವೂ ಚರ್ಚೆಯಾಗತೊಡಗಿದೆ.

ಈ ಹಿಂದೆ ರಸ್ತೆ ಹೊಂಡ ಬಿದ್ದು ಸವಾರರಿಗೆ ತೊಂದರೆಯಾಗುವುತ್ತಿರುವುದ ಕುರಿತು ಧ್ವನಿ ಎತ್ತಿದಾಗ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಾಂಕ್ರೀಟ್ ಹಾಕಿ ತಾತ್ಕಾಲಿಕ ಪರಿಹಾರ ಕಲ್ಪಿಸಿದ್ದರು. ಈಗ ಮತ್ತೆ ಹೊಂಡ ಬಿದ್ದಿದ್ದು ಶಾಶ್ವತ ಪರಿಹಾರಕ್ಕಾಗಿ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಇದೇ ರಸ್ತೆ ಮೂಲಕ ಓಡಾಡುವ ಅಧಿಕಾರಿಗಳು, ಜನ ಪ್ರತಿನಿಧಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸಂಬಂಧ ಪಟ್ಟ ಇಲಾಖೆಯವರು ಗಮನಹರಿಸಿ ಮುಂದಾಗುವ ಅಪಾಯವನ್ನು ತಪ್ಪಿಸುವಲ್ಲಿ ಕೈಜೋಡಿಸಬೇಕಾಗಿದೆ.