




ಕಡಬ ಟೈಮ್ಸ್ (KADABA TIMES):ಕಡಬದ ಕಾಲೇಜು ರಸ್ತೆಯಲ್ಲಿ ಜನಪ್ರೀಯ ಆಮ್ಲೆಟ್ ಸೆಂಟರ್ ಮುನ್ನಡೆಸುತ್ತಿದ್ದ ಅಬ್ದುಲ್ ಖಾದರ್ ಕೋಡಿಂಬಾಳ ಆದಿತ್ಯವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕಡಬದಲ್ಲಿ ಆಮ್ಲೆಟ್ ಖಾದ್ರಿ ಎಂದೆ ಹೆಸರುವಾಸಿಯಾಗಿದ್ದ ಇವರು ತಮ್ಮ ಅಂಗಡಿಯಲ್ಲಿ ಮೊಟ್ಟೆಯಲ್ಲಿ ವೈವಿಧ್ಯ ತಿನುಸು ಮಾಡುವ ಮೂಲಕ ಪ್ರಸಿದ್ದಿ ಪಡೆದಿದ್ದರು.ಸಂಚಾರಿ ಆಮ್ಲೆಟ್ ಅಂಗಡಿ ಹೊಂದಿದ್ದಲ್ಲದೆ ಕಾಲೇಜು ರಸ್ತೆಯಲ್ಲಿಯೂ ಅಂಗಡಿ ತರೆದು ವ್ಯವಹಾರ ಆರಂಭಿಸಿದ್ದರು.

ಮೃತರ ಅಂತ್ಯ ಸಂಸ್ಕಾರ ಕೋಡಿಬಾಂಳದ ಮಸೀದಿಯಲ್ಲಿ ಸೋಮವಾರ ನಡೆಯಲಿದೆ ಎಂದು ತಿಳಿದು ಬಂದಿದೆ.