




ಕಡಬ ಟೈಮ್ಸ್ (KADABA TIMES):ಹೊಸದಿಲ್ಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಜನತಾ ಕರ್ಫ್ಯೂನಿಂದ ಆರಂಭವಾಗಿ ಇದುವರೆಗೂ ನಾವು ಸಾಧಿಸಿದ ಪ್ರಗತಿ ಶ್ಲಾಘನೀಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೊರೊನಾ ಕಾಲದಲ್ಲಿ ಸರಣಿ ಹಬ್ಬಗಳು ಬಂದಿದ್ದು, ಈ ನಿಟ್ಟಿನಲ್ಲಿ ಭಾರತ ಮತ್ತಷ್ಟು ಜವಾಬ್ದಾರಿಯಿಂದ ವರ್ತಿಸಬೇಕಿದೆ ಎಂದು ದೇಶವಾಸಿಗಳಲ್ಲಿ ಮನವಿ ಮಾಡಿದರು.

ಭಾಷಣದ ಮುಖ್ಯಂಶಗಳು
- ಭಾರತದ ಗುಣಮುಖ ಪ್ರಮಾಣ ಇಡೀ ವಿಶ್ವದಲ್ಲೇ ಅತ್ಯಧಿಕವಾಗಿದ್ದು, ನಾವು ಇದನ್ನು ಕಾಪಾಡಬೇಕಿದೆ.
- ಭಾರತದಲ್ಲಿ ಕೊರೊನಾ ಗುಣಮುಖ ಪ್ರಮಾಣ ಶೇ.83ರಷ್ಟಿರುವುದು ನಮ್ಮ ಸಾಧನೆಯೇ ಸರಿ.
- ಯಾವುದೇ ತರಹದ ಬೇಜವಾಬ್ದಾರಿ ನಮ್ಮ ಪ್ರಾಣಕ್ಕೆ ಕುತ್ತು ತರಬಲ್ಲದು ಎಂಬುದನ್ನು ನಾವು ಮರೆಯಬಾರದು.
- ಕೊರೊನಾ ಲಸಿಕೆ ಬರುವವರೆಗೂ ನಾವು ಜಾಗರೂಕರಾಗಿಬೇಕು.
- ದೇಶದ ಜನತೆಗೆ ಸರಣಿ ಹಬ್ಬಗಳ ಶುಭ ಕೋರಿದ ಪ್ರಧಾನಿ ಮೋದಿ.
- ಹಬ್ಬಗಳ ಸಮಯದಲ್ಲಿ ನಾನು ಪ್ರತಿಯೊಂದೂ ಕುಟುಂಬವೂ ಸುರಕ್ಷಿತವಾಗಿರುವುದನ್ನು ನೋಡಬಯಸುವುದಾಗಿ ಹೇಳಿದ ಪ್ರಧಾನಿ.
ಹೀಗೆ ಕೊರೊನಾ ಕಾಲದ ಸರಣಿ ಹಬ್ಬಗಳ ಸಮಯದಲ್ಲಿ ಜನತೆ ನಿಭಾಯಿಸಬೇಕಾದ ಜವಾಬ್ದಾರಿಗಳ ಬಗ್ಗೆ ವಿಸ್ತೃತವಾಗಿ ಮಾತನಾಡಿದ ಪ್ರಧಾನಿ ಮೋದಿ, ಹಬ್ಬಗಳಿಂದ ದೇಶದಲ್ಲಿ ಹೊಸ ಚೈತನ್ಯ ನಲಿದಾಡುವಂತಾಗಲಿ ಎಂದು ಹಾರೈಸಿದರು.