




ಕಡಬ ಟೈಮ್ಸ್ (KADABA TIMES):ಎಡಮಂಗಲ ಗ್ರಾಮದ ಎರಿಂಬಿಲದಿಂದ ಕಾಣೆಯಾಗಿದ್ದ ಮಹಿಳೆಯನ್ನು ಪೊಲೀಸರು ಮಂಡ್ಯದಲ್ಲಿ ಪತ್ತೆ ಹಚ್ಚಿದ್ದಾರೆ.
ಎಡಮಂಗಲದ ಎರಿಂಬಿಲ ಮೋಹನ ಎ.ಎಂಬವರ ಪತ್ನಿ ಮಂಜುಳ(28) ಎಂಬವರು ಸೆ.13 ರಂದು ಮನೆಯಿಂದ ಕಾಣೆಯಾಗಿದ್ದಾರೆಂದು ಅವರ ಪತಿ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ಮಂಡ್ಯದ ಬಡಾವಣೆಯಲ್ಲಿ ಪತ್ತೆಹಚ್ಚಿ ಸುಳ್ಯಕ್ಕೆ ಕರೆದುಕೊಂಡು ಬಂದು ಮನೆಯವರೊಂದಿಗೆ ಕಳುಹಿಸಿರುವುದಾಗಿ ತಿಳಿದು ಬಂದಿದೆ.