




ಕಡಬ ಟೈಮ್ಸ್ ,ಪ್ರಮುಖ ಸುದ್ದಿ : ಕಡಬ : ಸುಳ್ಯ: ದಕ್ಷಿಣ ಕನ್ನಡ ಜೆಲ್ಲೆಯಲ್ಲಿ ಮರಳು ಮತ್ತು ಕೆಂಪು ಕಲ್ಲಿನ ಅಭಾವವನ್ನು ವಿರೋಧಿಸಿ ಸುಳ್ಯ ಬಿಜೆಪಿ ಮಂಡಲ ಸಮಿತಿಯ ವತಿಯಿಂದ ಕಡಬದ ಮಿನಿ ವಿಧಾನ ಸೌಧದ ಬಳಿ ಜುಲೈ 14 ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ
ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು
ಮಾತನಾಡಿ, ಮರಳು ಹಾಗೂ ಕೆಂಪು ಕಲ್ಲಿನ ಅಭಾವದಿಂದ
ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಆದುದರಿಂದ ನಿಯಮಗಳನ್ನು ಸರಳೀಕರಣ ಮಾಡಿ ಮರಳು ಮತ್ತು ಕೆಂಪು ಕಲ್ಲು ಎಲ್ಲರಿಗೂ ದೊರೆಯುವಂತೆ
ಮಾಡಬೇಕು, , ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಬೇಕೆಂದು ಒತ್ತಾಯಿಸಿದರು.
ಮನವಿಯನ್ನು ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಸ್ವೀಕರಿಸಿದರು. ಆಗ್ರಹವನ್ನು ಸರ್ಕಾರಕ್ಕೆ ತಲುಪಿಸುವುದಾಗಿ ತಿಳಿಸಿದರು.
ಸಭೆಯಲ್ಲಿ
ಬಿಜೆಪಿ ದಕ್ಷಿಣ ಕನ್ನಡ ಉಪಾಧ್ಯಕ್ಷ ರಾಕೇಶ್ ರೈ ಕೆಡೆoಜಿ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕೃಷ್ಣ
ಶೆಟ್ಟಿ ಕಡಬ, ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಮನವಳಿಕೆ , ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಕೃಷ್ಣ ಎಂ ಆರ್, ಕಡಬ
ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪ್ರಕಾಶ್, ಕಡಬ ಮಹಾಶಕ್ತಿ
ಕೇಂದ್ರದ ಕಾರ್ಯದರ್ಶಿ ಅಶೋಕ್ ಕಡಬ, ಮತ್ತು ಗುತ್ತಿಗೆದಾರರು, ಕಾರ್ಮಿಕರು, ಲಾರಿ ಚಾಲಕರು, ಮತ್ತು
ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.