




ಕಡಬ ಟೈಮ್ಸ್(KADABA TIMES):ರಾಮಕುಂಜ/ಕೊಯಿಲ: ಹಿಂದೂ ಯುವತಿ ಮುಸ್ಲಿಂ ಸ್ನೇಹಿತೆಯ ಮನೆಗೆ ಹೋಗಿರುವ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಗೊಂದಲ ಉಂಟಾದ ಹಾಗೂ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿರುವ ಪ್ರಕರಣವೊಂದು ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ಕುದ್ಲೂರು ಎಂಬಲ್ಲಿ ವಾರದ ಹಿಂದೆ ನಡೆದಿರುವುದು ತಡವಾಗಿ ವರದಿಯಾಗಿದೆ.
ಉಪ್ಪಿನಂಗಡಿಯ ಬಟ್ಟೆ ಮಳಿಗೆಯೊಂದರಲ್ಲಿ ಉದ್ಯೋಗಿಯಾಗಿರುವ ಕೊಯಿಲ ಗ್ರಾಮದ ಮುಸ್ಲಿಂ ಯುವತಿಯ ಮನೆಗೆ ಅದೇ ಮಳಿಗೆಯಲ್ಲಿ ಉದ್ಯೋಗಿಯಾಗಿರುವ ಉಪ್ಪಿನಂಗಡಿಯ ಯುವತಿ ಜು.12ರಂದು ಬೆಳಿಗ್ಗೆ ಬಂದಿದ್ದರು. ಹಿಂದೂ ಯುವತಿ ಉಪ್ಪಿನಂಗಡಿಯಿಂದ ಆತೂರು ಗೋಳಿತ್ತಡಿಗೆ ಜೀಪಿನಲ್ಲಿ ಬಂದಿದ್ದು ಅಲ್ಲಿಂದ ರಿಕ್ಷಾದಲ್ಲಿ ಕುದ್ಲೂರಿನ ಮುಸ್ಲಿಂ ಗೆಳತಿಯ ಮನೆಗೆ ತೆರಳಿದ್ದರು.

ಈ ಸುದ್ದಿಯನ್ನೂ ಓದಿರಿ:ದೇವರ ಹೆಸರಿನಲ್ಲಿ ದೆಹಲಿಯಲ್ಲಿ ಪ್ರಮಾಣಚವನ ಸ್ವೀಕರಿಸಿದ ರಾಜರ್ಷಿ ವೀರೇಂದ್ರ ಹೆಗ್ಗಡೆ
ಈ ಬಗ್ಗೆ ಮಾಹಿತಿ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಆ ಮನೆಯಿಂದ ತುಸು ದೂರ, ರಸ್ತೆಯಲ್ಲಿ ಜಮಾಯಿಸಿದ್ದರಿಂದ ಗೊಂದಲ ನಿರ್ಮಾಣವಾಗಿತ್ತು. ಘಟನೆ ಕುರಿತಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಕಡಬ ಪೊಲೀಸರಿಗೂ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಿಂದೂ ಯುವತಿಯನ್ನು ಠಾಣೆಗೆ ಕರೆದೊಯ್ದು ಆ ಬಳಿಕ ಆಕೆಯ ಅಣ್ಣನ ಜೊತೆ ಕಳುಹಿಸಿಕೊಟ್ಟಿದ್ದಾರೆ ಎಂದು ವರದಿಯಾಗಿದೆ.